About Us

Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo.

"ಕೂಟದ ಕುರಿತು ಒಂದೆರಡು ಮಾತು"

ಪ್ರೀತಿಯ ಸಹೋದ್ಯೋಗಿಗಳೆ ಮತ್ತು ಸ್ನೇಹಿತರೆ..

ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟ ಜಾಲತಾಣ” ಕ್ಕೆ ಸ್ವಾಗತ..

ಬ್ಯಾಂಕ್ನಲ್ಲಿರುವ ಕನ್ನಡಿಗರನ್ನೆಲ್ಲಾ ಒಗ್ಗೂಡಿಸಬೇಕೆನ್ನುವ ಆಸೆ ಬಹಳ ದಿನಗಳಿಂದ ಇತ್ತು.. ಈ ಗುಂಪಿನ ಮೂಲಕ ಆಸೆಗೆ ಬಲ ಬಂದಿದೆ..

ನವೆಂಬರ್ ೧, ೨೦೧೮ ರ ಕನ್ನಡ ರಾಜ್ಯೋತ್ಸವದ ಸುಸಂದರ್ಭದಂದು ಈ ಗುಂಪಿನ ರಚನೆಯಾಯಿತು..ಇಂದು ಈ ಗುಂಪಿಗೆ ನಿಮ್ಮನ್ನು ಸೇರ್ಪಡೆ ಮಾಡುತ್ತಾ ನಿಮ್ಮೆಲ್ಲರನ್ನು ಮತ್ತೆ ನಿಮ್ಮನ್ನು ಸ್ವಾಗತಿಸುತ್ತನೆ..

ದೇಶದ ಬ್ಯಾಂಕಿಂಗ್‌ ಕ್ಷೇತ್ರಕ್ಕೆ ಕರ್ನಾಟಕದ ಮತ್ತು ಕನ್ನಡಿಗರ ಕೊಡುಗೆ ಅವಿಸ್ಮರಣೀಯ.. ಇಂದು ದೇಶದಲ್ಲಿರುವ ಹಲವು ದಿಗ್ಗಜ ಬ್ಯಾಂಕುಗಳ ಉಗಮ ಸ್ಥಾನ ಕರ್ನಾಟಕ ಎಂದು ಹೇಳಲು ಹೆಮ್ಮೆ ಎನಿಸುತ್ತದೆ.. ಈ ಬ್ಯಾಂಕುಗಳು ದೇಶದ ಆರ್ಥಿಕತೆಗೂ ಬಲ ತುಂಬುತ್ತಿವೆ..

ಕೆಲವು ದಶಕಗಳ ಹಿಂದೆ ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಕನ್ನಡಿಗರದ್ದೇ ಪಾರುಪತ್ಯವಾಗಿತ್ತು..ರಾಜ್ಯದ ಬ್ಯಾಂಕುಗಳ ಶಾಖೆಗಳಲ್ಲಿ ಕನ್ನಡಿಗರೇ ಹೆಚ್ಚಾಗಿ ಕಾಣಸಿಗುತ್ತಿದ್ದರು…ಆದರೆ ಕಾಲಾಂತರದಲ್ಲಿ ಬ್ಯಾಂಕ್ ಉದ್ಯೋಗದ ಕಡೆಗೆ ಯುವ ಕನ್ನಡಿಗರ ನಿರಾಸಕ್ತಿಯಿಂದಲೋ ಅಥವಾ ಇನ್ಯಾವುದೋ ಕಾರಣದಿಂದಲೋ ಕನ್ನಡಿಗರ ಸಂಖ್ಯೆ ಕ್ಷೀಣಿಸುತ್ತಾ ಬಂದಿದೆ..ಪರಿಣಾಮ ರಾಜ್ಯದ ಬ್ಯಾಂಕುಗಳಲ್ಲೇ ಕನ್ನಡಿಗರು ಅಲ್ಪಸಂಖ್ಯಾತರಾಗಿರುವುದು ವಿಷಾದನೀಯ..

ಪ್ರಸಕ್ತ ಸನ್ನಿವೇಶದಲ್ಲಿ ಎಲ್ಲಾ ಸಮಾನ ಮನಸ್ಕ ಕನ್ನಡ ಮನಸ್ಸುಗಳ ಒಗ್ಗೂಡುವಿಕೆ ಅತಿ ಮುಖ್ಯವೆನಿಸಿತು..ಆದ್ದರಿಂದ ಈ ಗುಂಪಿನ ರಚನೆಯ ಮೂಲಕ ಹಲವು ಶಾಖೆಗಳಲ್ಲಿ ಚದುರಿ ಹೋಗಿರುವ ಕನ್ನಡಿಗರನ್ನು ಒಗ್ಗೂಡಿಸಿ ತನ್ಮೂಲಕ ಕನ್ನಡಿಗರ ಧ್ವನಿಗೆ ವೇದಿಕೆಯಾಗುವತ್ತ ಒಂದು ಸಣ್ಣ ಹೆಜ್ಜೆ ಇರಿಸುತ್ತಿದ್ದೇವೆ.. ಕೂಟ ಈಗಾಗಲೇ 5ವರ್ಷದಿಂದ ರಾಜ್ಯೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸುತ್ತ ಬಂದಿದ್ದು, ಬ್ಯಾಂಕಿಂಗ್ ಉದ್ಯೋಗಿಗಳ ಪ್ರತಿಭೆ ಒಳಗೊಂಡ ದುಂಬಿ ತ್ರೈಮಾಸಿಕ ಪತ್ರಿಕೆ ಯನ್ನು 11ಸಂಚಿಕೆ ಬಿಡುಗಡೆ ಮಾಡಿದೆ… ಕೂಟದ ಈ ಎಲ್ಲಾ ಪ್ರಯತ್ನಕ್ಕೆ ತಮ್ಮೆಲ್ಲರ ಸಹಕಾರವನ್ನು ಕೋರುತ್ತಾ , ಮುಂಬರುವ ದಿನಗಳಲ್ಲಿ ಈ ಗುಂಪು ಭೌತಿಕ ಅಸ್ತಿತ್ವವನ್ನು ಪಡೆದು ಬ್ಯಾಂಕಿನ ಎಲ್ಲಾ ಕನ್ನಡ ಮನಸ್ಸುಗಳು ಸೇರಿ ಕನ್ನಡದ ಏಳಿಗೆಗಾಗಿ ಶ್ರಮಿಸುವಂತಾಗ ಬೇಕೆಂಬುದೇ ನಮ್ಮ ಹಾರೈಕೆ…

ಇಂತಿ,

ಬ್ಯಾಂಕಿಂಗ್ ಉದ್ಯೋಗಿಗಳ ಕನ್ನಡ ಕೂಟ